ಡ್ರಾಮಾವು ಯೋಗರಾಜ್ ಮೂವೀಸ್ ಮತ್ತು ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಯೋಗರಾಜ್ ಭಟ್ ಬರೆದು, ನಿರ್ದೇಶಿಸಿದ ಮತ್ತು ಸಹ-ನಿರ್ಮಾಣ ಮಾಡಿರುವ 2012 ರ ಕನ್ನಡ ರೋಮ್ಯಾಂಟಿಕ್ ಹಾಸ್ಯ ಥ್ರಿಲ್ಲರ್ ಆಗಿದೆ. ಇದರಲ್ಲಿ ಯಶ್, ರಾಧಿಕಾ ಪಂಡಿತ್, ಸತೀಶ್ ನೀನಾಸಂ ಮತ್ತು ಸಿಂಧು ಲೋಕನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಹಿರಿಯ ನಟ ಅಂಬರೀಶ್ ಅವರು ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಚಿತ್ರಕ್ಕೆ ಸಂಗೀತವನ್ನು ವಿ. ಹರಿಕೃಷ್ಣ ಅವರು ಸಂಯೋಜಿಸಿದ್ದಾರೆ ಹಾಡುಗಳಿಗೆ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಬರೆದಿದ್ದಾರೆ. ಈ ಹಿಂದೆ ಮುಂಗಾರು ಮಳೆ ಎಂಬ ಬೃಹತ್ ಯಶಸ್ವಿ ಚಿತ್ರದಲ್ಲಿ ಭಟ್ ಅವರೊಂದಿಗೆ ಕೆಲಸ ಮಾಡಿದ್ದ ಕೃಷ್ಣ ಅವರನ್ನು ಚಿತ್ರಕ್ಕೆ ಛಾಯಾಗ್ರಾಹಕರಾಗಿ ನೇಮಿಸಲಾಯಿತು. == ಪಾತ್ರವರ್ಗ == ವೆಂಕಟೇಶ ಪಾತ್ರದಲ್ಲಿ ಯಶ್ ನಂದಿನಿ ಪಾತ್ರದಲ್ಲಿ ರಾಧಿಕಾ ಪಂಡಿತ್ ಸತೀಶನಾಗಿ ಸತೀಶ್ ನೀನಾಸಂ ಚಂದ್ರಿಕಾ ಪಾತ್ರದಲ್ಲಿ ಸಿಂಧು ಲೋಕನಾಥ್ ಡಿಸೋಜಾ ಪಾತ್ರದಲ್ಲಿ ಸಂಪತ್ ಸುಚೇಂದ್ರ ಪ್ರಸಾದ್ ಕಾಲೇಜು ಪ್ರಿನ್ಸಿಪಾಲ್ ಶಾಲಿವಾಹನ ಗಾಯತ್ರಿ ಪಾತ್ರದಲ್ಲಿ ಮಾಳವಿಕಾ ಲೋಹಿತಾಶ್ವ ಅಚ್ಯುತ್ ಕುಮಾರ್ ರಾಜಶೇಖರ್ ನಾಯ್ಡು ಸಾಯಿ ಮಹೇಶ್ ಎಂ ಎಸ್ ಉಮೇಶ್ ರಾಕ್‌ಲೈನ್ ವೆಂಕಟೇಶ್ ಸಂಗೀತಾ ರವಿ ಸಂತೆಹಕ್ಲು ಬೆಂಗಳೂರು ನಾಗೇಶ್ ಅಭಿನಯ ಕಲ್ಯಾಣಿ ಗಿರೀಶ್ ಮಿತ್ರ ಹೊನ್ನವಳ್ಳಿ ಕೃಷ್ಣ ಚಂದ್ರಿಕಾ ತಂದೆಯಾಗಿ ರಾಕ್‌ಲೈನ್ ಸುಧಾಕರ್ ಗಂಗೆಯಾಗಿ ಹಂಸ ಅಂಬರೀಶ್ ಬುಲ್ಬುಲ್ ಆಗಿ, ಕ್ಯಾಮಿಯೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ == ಧ್ವನಿಮುದ್ರಿಕೆ == ಚಿತ್ರದ ಸಂಗೀತವನ್ನು ವಿ ಹರಿಕೃಷ್ಣ ಸಂಯೋಜಿಸಿದ್ದಾರೆ. ಆಡಿಯೋ ಆಲ್ಬಂ ಸೆಪ್ಟೆಂಬರ್, 2012 ರ ಕೊನೆಯಲ್ಲಿ ಬಿಡುಗಡೆಯಾಯಿತು ಮತ್ತು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. "ತುಂಡ್ ಹೈಕ್ಳ ಸಹವಾಸ" ದೊಡ್ಡ ಹಿಟ್ ಆಯಿತು. == ಪ್ರಶಸ್ತಿಗಳು == ಯೋಗರಾಜ್ ಭಟ್ - ಗೆದ್ದಿದ್ದಾರೆ - ಅತ್ಯುತ್ತಮ ಗೀತರಚನೆಕಾರರಿಗೆ ಫಿಲ್ಮ್‌ಫೇರ್ ಪ್ರಶಸ್ತಿ - 'ಬೊಂಬೆ ಅಡ್ಸೋನು' ಹಾಡಿಗೆ ಕನ್ನಡ ವಿಭಾಗದಲ್ಲಿ. ವಿ. ಹರಿಕೃಷ್ಣ - ಗೆದ್ದಿದ್ದಾರೆ - ಅತ್ಯುತ್ತಮ ಸಂಗೀತ ನಿರ್ದೇಶಕರಿಗೆ ಫಿಲ್ಮ್‌ಫೇರ್ ಪ್ರಶಸ್ತಿ - ಕನ್ನಡ ವಿಭಾಗ ಸೋನು ನಿಗಮ್ - ' ಚೆಂಡುತಿಯ ಪಕ್ಕದಲಿ' ಹಾಡಿಗಾಗಿ 'ಅತ್ಯುತ್ತಮ ಹಿನ್ನೆಲೆ ಗಾಯಕ ಪುರುಷ' ವಿಭಾಗದಲ್ಲಿ ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ಸ್ ಗೆದ್ದಿದ್ದಾರೆ. ಯೋಗರಾಜ್ ಭಟ್ - 'ಬೊಂಬೆ ಅಡ್ಸೋನು ' ಹಾಡಿಗೆ 'ಅತ್ಯುತ್ತಮ ಗೀತರಚನೆಕಾರ' ವಿಭಾಗದಲ್ಲಿ ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ಸ್ ಗೆದ್ದಿದ್ದಾರೆ. ಸೋನು ನಿಗಮ್ - ನಾಮನಿರ್ದೇಶಿತ - ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಫಿಲ್ಮ್‌ಫೇರ್ ಪ್ರಶಸ್ತಿ - 'ಚೆಂದುತಿಯ ಪಕ್ಕದಲಿ' ಗೀತೆಗಾಗಿ ಕನ್ನಡ ವಿಭಾಗ ಅತ್ಯುತ್ತಮ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ – ಕನ್ನಡ ವಿಭಾಗ ಯಶ್ - ಅತ್ಯುತ್ತಮ ನಟನಿಗಾಗಿರುವ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ – ಕನ್ನಡ ವಿಭಾಗ ಸಿಂಧು ಲೋಕನಾಥ್ -ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ – ಕನ್ನಡ ವಿಭಾಗ ದಿ ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ಸ್‌ಗೆ 'ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ ದಿ ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ಸ್‌ಗೆ 'ಅತ್ಯುತ್ತಮ ಯುವ ಚಲನಚಿತ್ರ' ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ ವಿ. ಹರಿಕೃಷ್ಣ - ನಾಮನಿರ್ದೇಶಿತ - ದಿ ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ಸ್‌ಗಾಗಿ 'ಅತ್ಯುತ್ತಮ ಗಾಯಕ ಪುರುಷ' ವರ್ಗ == ಬಾಕ್ಸ್ ಆಫೀಸ್ == ಬಿಡುಗಡೆಯಾದ ಮೇಲೆ ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿತು. ಚಿತ್ರವು 100 ದಿನಗಳ ಓಟವನ್ನು ಪೂರ್ಣಗೊಳಿಸುವ ಮೂಲಕ 2012 ರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಯಿತು ಮತ್ತು ಅದರ ₹ 4 ಕೋಟಿ ರೂಪಾಯಿಗಳ ಬಜೆಟ್‌ಗೆ ಎದುರು ₹ 20 ಕೋಟಿ ರೂಪಾಯಿ ಗಳಿಸಿತು ಮತ್ತು ಬ್ಲಾಕ್‌ಬಸ್ಟರ್ ಎಂದು ಘೋಷಿಸಲಾಯಿತು. == ಪುರಸ್ಕಾರಗಳು == == ಸಾಗರೋತ್ತರ ಬಿಡುಗಡೆ == ಚಿತ್ರವು ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಯುಎಇಯಲ್ಲೂ ಚಿತ್ರದ ಪ್ರಥಮ ಪ್ರದರ್ಶನ ನಡೆಯಿತು. ಜರ್ಮನಿಯಲ್ಲೂ ಚಿತ್ರವು ಪ್ರದರ್ಶನಗೊಂಡಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == @ ಐ ಎಮ್ ಡಿ ಬಿ